ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್
ವ್ಯವಸಾಯ ಕ್ಷೇತ್ರದಲ್ಲಿ ಸಂಶೋಧನೆಗಳ ಪ್ರವರ್ತನೆ, ನಿರ್ದೇಶನ ಹಾಗೂ ಸುಸಂಘಟನೆ ಉದ್ದೇಶದಿಂದ 1929ರಲ್ಲಿ ಭಾರತದಲ್ಲಿ ಸ್ಥಾಪಿತವಾದ ಸಂಸ್ಥೆ. ಇದರ ನೇರ ಆಡಳಿತಕ್ಕೊಳಪಟ್ಟ ಯಾವ ಸಂಶೋಧನ ವಿಭಾಗವೂ ಇಲ್ಲ. ಕೇಂದ್ರ ಹಾಗೂ ರಾಜ್ಯ ಸಂಸ್ಥೆಗಳಲ್ಲೂ ವಿಶ್ವವಿದ್ಯಾನಿಲಯದಲ್ಲೂ ಪುರಸ್ಕøತ ಖಾಸಗಿ ಸಂಸ್ಥೆಗಳಲ್ಲೂ ಸಂಶೋಧನೆಯ ವ್ಯವಸ್ಥೆ ಏರ್ಪಡಿಸುವ ಹೊಣೆಗಾರಿಕೆ ಇದರದು. ಸರ್ಕಾರದ ಅನುದಾನದಿಂದಲೂ ಇತರ ಮೂಲಗಳಿಂದಲೂ ನಿರ್ಯಾತವಾಗುವ ಕೆಲವು ವ್ಯವಸಾಯೋತ್ಪನ್ನಗಳ ಮೇಲೆ ವಿಧಿಸಲಾಗುವ ಶೇಕಡ ಅರ್ಧದಷ್ಟು ಸುಂಕದಿಂದಲೂ ಇದು ತನ್ನ ಕಲಾಪಗಳಿಗೆ ಅಗತ್ಯವಾದ ಹಣ ಪಡೆಯುತ್ತದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ